== ಕಿರುಪರಿಚಯ == ಪಾವಗಡ ದ್ವಾರಕನಾಥ್‌ ಸತೀಶ್‌ ಚಂದ್ರ ಅವರು ರಂಗಭೂಮಿ ಹಾಗೂ ಕಿರುತೆರೆಗಳಲ್ಲಿ ಪೀ. ಡೀ. ಅಂತಲೇ ಜನಜನಿತರಾಗಿದ್ದಾರೆ. ಎನ್‌.ಎಂ.ಕೆ.ಆರ್.ವಿ. ಕಾಲೇಜಿನ ಪತ್ರಿಕೋದ್ಯಮದ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಇವರನ್ನು ರಂಗಭೂಮಿ ತನ್ನತ್ತ ಸೆಳೆದುಕೊಂಡಿತು. ರೇಡಿಯೋ ವೃತ್ತಿಗೆ ಪೂರ್ಣವಿರಾಮವನ್ನಿಟ್ಟು, ನಟನೆಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡರು. ಪ್ರದರ್ಶನ ಕಲಾ ಸಂಘವನ್ನು ಸ್ಥಾಪಿಸಿದ ಪೀಡೀ, ಈ ಮೂಲಕ ಅಸಂಖ್ಯಾತ ಕಲಾವಿದರನ್ನು ಒಂದೆಡೆ ಸೇರಿಸಿ ಅವರಿಗೊಂದು ವೇದಿಕೆ ನಿರ್ಮಿಸಿಕೊಟ್ಟರು. ರಂಗಭೂಮಿಯ ಜೊತೆಗೆ ಕಿರುತೆರೆಯತ್ತ ಹೊರಳಿದ ಪೀಡೀ ಅವರು ಹೆಸರಾಂತ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಹಿರಿತೆರೆಯಲ್ಲಿ ಹಾಸ್ಯ ಪಾತ್ರಗಳನ್ನು ಮಾಡುವ ಮೂಲಕ ಕನ್ನಡ ಚಿತ್ರ ರಸಿಕರ ಮನಗೆದ್ದಿದ್ದಾರೆ. == ಆರಂಭಿಕ ಜೀವನ == ಸತೀಶ್‌ ಚಂದ್ರ ಅವರ ತಾಯಿ ಶಿವಮೊಗ್ಗದವರು, ತಂದೆಯವರು ಮೂಲತಃ ಪಾವಗಡದವರಾದರೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಸತೀಶ್‌ಚಂದ್ರ ಅವರ ಜನ್ಮಸ್ಥಳ ಶಿವಮೊಗ್ಗ. ಪ್ರಾಥಮಿಕ ವಿದ್ಯಾಭ್ಯಾಸ ನಡೆದಿದ್ದು ಬಸವನಗುಡಿಯ ನ್ಯಾಷನಲ್‌ ಸ್ಕೂಲ್‌ನಲ್ಲಿ. ಹೆಚ್‌. ಕೆ. ಈ.ಎಸ್.‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದ ಇವರು. ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್‌ ಕಾಲೇಜಿನಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. == ಚಲಚಿತ್ರಗಳ ಪಟ್ಟಿ == = ಕಿರುತೆರೆ = ಪಾಂಡು ರಂಗ ವಿಠಲ ಭಲೇ ಬಸವ ಗಲಿ ಗಲಿ‌ ಸಿಮ್‌ ಸಿಮ್ ಪಾಪ ಪಾಂಡು 2 ವಾರಾನ್ನ ಚುನಾವಣಾ ಮಸಾಲ - ನ್ಯೂಸ್‌ 18 ಕನ್ನಡ = ಉಲ್ಲೇಖ =